ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಯಕ್ಷ ಮಂಜೂಷ ಅಮೆರಿಕ ಪ್ರವಾಸ

ಲೇಖಕರು : ಉದಯವಾಣಿ
ಶುಕ್ರವಾರ, ಜುಲೈ 4 , 2014
ಜುಲೈ 4, 2014

ಯಕ್ಷ ಮಂಜೂಷ ಅಮೆರಿಕ ಪ್ರವಾಸ

ಮಂಗಳೂರು : ಯಕ್ಷ ಮಂಜೂಷ ತಂಡ ಅಮೆರಿಕದ ವರ್ಜೀನಿಯಾದಲ್ಲಿ ಮತ್ತು ಮೇರಿಲ್ಯಾಂಡ್‌ನ‌ ಚಿನ್ಮಯ ಮಿಷನ್‌ನಲ್ಲಿ ಯಕ್ಷಗಾನ ತರಬೇತಿ ಮತ್ತು ಪ್ರದರ್ಶನಕ್ಕಾಗಿ ಅಮೆರಿಕ ಪ್ರವಾಸ ಕೈಗೊಳ್ಳಲಿದೆ ಎಂದು ತಂಡದ ನೇತೃತ್ವ ವಹಿಸಿರುವ ವಿದ್ಯಾ ಕೋಳ್ಯೂರು ತಿಳಿಸಿದ್ದಾರೆ.

ಯಕ್ಷ ಮಂಜೂಷ ತಂಡ ಯಕ್ಷಗಾನ ತರಬೇತಿ ಮತ್ತು ಪ್ರದರ್ಶನಕ್ಕಾಗಿ ಅಮೆರಿಕ ಪ್ರವಾಸ ಕೈಗೊಳ್ಳಲಿದೆ
ವರ್ಜೀನಿಯದಲ್ಲಿ 115 ಮತ್ತು ಚಿನ್ಮಯ ಮಿಶನ್‌ನಲ್ಲಿ 54 ಮಂದಿ ಮಕ್ಕಳಿಗೆ ತರಬೇತಿ ನೀಡಲಾಗುವುದು. ಚಿನ್ಮಯ ಮಿಶನ್‌ನಲ್ಲಿ ತಂಡದ ಕೆಲವು ಸದಸ್ಯರು ತೆರಳಿ ಈಗಾಗಲೇ ತರಬೇತಿ ಆರಂಭಿಸಿದ್ದು, ಜು. 18ರಂದು ಕೊನೆಗೊಳ್ಳಲಿದೆ. ಮೇರಿಲ್ಯಾಂಡ್‌, ವಾಶಿಂಗ್ಟನ್‌, ಎಡಿಸನ್‌, ರಿಚ್‌ಮಂಡ್‌, ಅಟ್ಲಾಂಟ, ಡಾಲ್ಲೆಸ್‌, ಆಸ್ಟಿನ್‌, ಫೀನಿಕ್ಸ್‌, ಸ್ಯಾನ್‌ಹೋಸ್‌, ಯುಎನ್‌ಸಿ, ಯುಎಂಸಿಯಲ್ಲಿ ಪ್ರದರ್ಶನ ನೀಡಲಾಗುವುದು. ಅಮೆರಿಕದಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ಸೆ. 6ರಂದು ಪ್ರದರ್ಶನ ನಡೆಯಲಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಬುಧವಾರ ವಿವರಿಸಿದರು.

ಭಾಗವತರಾಗಿ ಪಟ್ಲ ಸತೀಶ್‌ ಶೆಟ್ಟಿ, ಮದ್ದಳೆಗಾರರಾಗಿ ಪದ್ಮನಾಭ ಉಪಾಧ್ಯಾಯ, ಚೆಂಡೆವಾದಕರಾಗಿ ಬೆಳುವಾಯಿ ದೇವಾನಂದ ಭಟ್‌ ಭಾಗವಹಿಸಲಿದ್ದಾರೆ. ತಂಡದಲ್ಲಿ ವಿದ್ಯಾ ಕೋಳ್ಯೂರು, ಹರಿನಾರಾಯಣ ಎಡನೀರು, ಮೋಹನ ಬೆಳ್ಳಿಪ್ಪಾಡಿ, ಪ್ರಶಾಂತ್‌ ಶೆಟ್ಟಿ ನೆಲ್ಯಾಡಿ, ರಾಕೇಶ್‌ ರೈ ಅಡ್ಕ, ಅರುಣ್‌, ಸರವು ಕೃಷ್ಣ ಭಟ್‌ ಇದ್ದಾರೆ. ಸೆ. 11ರಂದು ತಂಡ ವಾಪಸ್ಸಾಗಲಿದೆ ಎಂದರು.

ಪಟ್ಲ ಸತೀಶ್‌ ಶೆಟ್ಟಿ, ಪದ್ಮನಾಭ ಉಪಾಧ್ಯಾಯ, ಬೆಳುವಾಯಿ ದೇವಾನಂದ ಭಟ್‌ ಉಪಸ್ಥಿತರಿದ್ದರು.



ಕೃಪೆ : http://www.udayavani.com

Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ